Tuesday 29 December 2009

degreeಗೆ ಬಂದ ಮೇಲೆ........


puc ಮುಗಿಸಿದ ಮೇಲೆ ಕನಸುಗಳಿಗೆ ರೆಕ್ಕೆ ಬಂದಿದ್ದೆ degree ಗೆ ಸೇರಿದ ಮೇಲೆ, ಕನಸುಗಳೆಂದರೇನು ಒಂದೆ ಎರಡೆ, ಸಾವಿರಾರು ಕೆಲವೊಂದು private ಅದ್ರೆ ಇನ್ನು ಕೆಲವು public. ಮೊದಲ ಬಾರಿ college ಗೆ ಬಂದಾಗ most of all ಹೊಸ ಮುಖಗಳು ಗೊತ್ತಿದ್ದೊರು ಬೆರಳೆಣಿಕೆಯಷ್ಟು ಮಾತ್ರ.
ಬೇರೆ ಊರಿನವರು ಬೇಜ್ಜಾನ್ ಜನ ಇದ್ರು, but, highlight ಅಗ್ತಿದ್ದದ್ದು ಮಾತ್ರ ನಮ್ಮೂರ್ನೊರು, ಅವರಲ್ಲಿ ನಾನು ಒಬ್ಬ. ಮೊದ್ಲು ಮೊದ್ಲು ಎಲ್ಲದಕ್ಕೂ ಹಿಂಜರಿತಿದ್ದ ನಾನು leader ಥರ ಆಗೊದೆ. ನನ್ ಜೊತೆ ವಿನಾಯಕ ಅನ್ನೋ ಆದಿಮಾನವ ಸಾಥ್ ಕೊಡ್ತಿದ್ದ. ಆದಿಮಾನವ ಅನ್ನೋಕೆ ಕಾರಣ ನಂತರ ಕೊಡ್ತಿನಿ ok. first year ನಲ್ಲಿ new year party ನ class ನಲ್ಲಿ ಕಾಟಾಚಾರಕ್ಕೆ arrange ಮಾಡಿದ್ವಿ, ಆ function ಗೆ ನಿರೂಪಣೆ ನಾನ್ ಮಾಡಿದೆ. feb ಬಂತು ಪ್ರೇಮಿಗಳ ದಿನ ಹುಡುಗ್ರೆಲ್ಲಾ ಒತ್ತಾಯಮಾಡಿ stage ಮೇಲೆ ಕಳ್ಸಿದ್ರು
ಸ್ವಲ್ಪ ಹೆದ್ರಿಕೆಯಾದ್ರು ಹಂಗೆ manage ಮಾಡಿ program ಮಾಡಿದೆ(first in college history). collegeನಲ್ಲೆಲ್ಲಾ ನಮ್ದೆ ಮಾತು ಹಂಗಂತೆ ಹಿಂಗಂತೆ.
ಈಗ ಕಾರಣ ಕೊಡ್ತಿನಿ ಯಾಕೆ ವಿನಾಯಕ ಅನ್ನೋನಿಗೆ ಆದಿಮಾನವ ಅಂತ ಹೆಸರು ಕೊಟ್ಟೆ ಅಂತ. ಅವ್ನು ನಂಗೆ 8th ಇಂದ friend. ಅವನದು ಒಂದು ಕೆಟ್ಟ ಗುಣ ಅಂದ್ರೆ ಯಾರಿಗು ಹೊಂದಿಕೆಯಾಕ್ತ ಇರಲಿಲ್ಲ, ಇನ್ನೊಬ್ಬರು ಚನ್ನಾಗಿದ್ರೆ ಹೊಟ್ಟೆ ಉರ್ಕೊತಿದ್ದ, ಇನ್ನೊಬ್ಬರನ್ನ ಬರಿ comment ಮಾಡೊದ್ರಲ್ಲೆ time ಕಳಿತಿದ್ದ, ಎಲ್ಲಾರ ಜೊತೆ ಜಗಳ ಮಾಡ್ಕೊಂಡು ಮಾತ್ ಬಿಡ್ತಿದ್ದ(ನಾನು ಮಾತು ಬಿಟ್ಟಿದ್ದೆ but ಮತ್ತೆ ಹೋಗಿ ನಾನೆ ಮಾತಾಡ್ಸಿದೆ), ಯಾರಾದ್ರು ಹೌದು ಅಂದ್ರೆ ಅವ್ನು ಅಲ್ಲ ಅಂತಿದ್ದ, ಯಾರದ್ರು ಚನ್ನಾಗಿ dress ಮಾಡ್ಕೊಂಡ್ ಬಂದ್ರೆ
ತಮಾಷೆ ಮಾಡೊದು ಹಂಗೆಲ್ಲಾ ಮಾಡ್ತಿದ್ದ.... ಉಸ್ಸಪ್ಪ ಹೇಳ್ತಾ ಹೋದ್ರೆ time ಸಾಕಾಗಲ್ಲ, ನೋಡಿ ಇವನನ್ನ ಆದಿಮಾನವ ಅನ್ದೆ ಏನನ್ಬೇಕು...
ನಿಜವಾಗ್ಲು ನಾನು ಬಹಳ ಧರ್ಯವಂತ ಅಂತಾನೆ ಹೇಳ್ಬಹುದು, ಯಾಕೆ ಗೊತ್ತಾ youth fest ಗೆ date ಬಂದಿತ್ತು.........

Sunday 27 December 2009

ಬರಹಕ್ಕೆ ಮುನ್ನುಡಿ

ಒಂದೊಂದು ಬಾರಿ ಮನಸ್ಸಿನ ಭಾವನೆಗಳ ತೀರ್ವತೆ ಎಷ್ಟಿರುತ್ತೆ ಅಂದ್ರೆ, ಅತ್ತುಬಿಡಬೇಕು ಅನ್ಸುತ್ತೆ.....
ತಂದೆ-ತಾಯಿ ಹತ್ರ ಕೆಲವೊಂದು ವಿಷಯಗಳನ್ನ ಹೆಳ್ತಿವಿ, ಕೆಲವೊಂದು ಇಲ್ಲ. ಆ ಹೇಳಲಾಗದ ವಿಷಯಗಳನ್ನ close friends ಹತ್ರ ಹೆಳ್ಕೊತೀವಿ. close friends ಹತ್ರ ಹೇಳಿದ್ದು satisfy ಆಗ್ಲಿಲ್ಲಾ ಅಂದಾಗ, ವಿಷಯ ತಲೆನ ಕೊರಿತಾ ಇರುತ್ತೆ, ಯಾರ್ ಮುಂದೆಯಾದ್ರು ಹೇಳ್ಕೊಬೇಕು ಅನ್ನಿಸಿದಾಗ......
ನಾನಿರೊದು ಬಳ್ಳಾರಿ ಜಿಲ್ಲೆಯ ಕೊಟ್ಟೂರು ಅನ್ನೋ ಊರು, ಹಳ್ಳಿಗೆ ಹಳ್ಳಿ ಅಲ್ಲ, cityಗೆ cityನು ಅಲ್ಲ, middle class ಜನ ಜಾಸ್ತಿ, ನಮ್ಮೂರಿನ ಜನ elect ಮಾಡಿ ಕಳಿಸಿದ್ ರಾಜಕಾರಣಿಗಳನ್ನ ಸಿಕ್ಕಾಪಟ್ಟೆ ಬಯ್ಕೊತಿರ್ತಿನಿ ಯಾಕ್ ಗೊತ್ತ??????????????
ಪ್ರತಿ ಸಾರಿ ಊರಲ್ಲಿ ಅಡ್ಡಾಡ್ಬೇಕಾದ್ರೆ ಆ road , bus stand, ಲಂಚ ತಿನ್ನೋ officers ಎಲ್ಲಾ ನೋಡಿದಾಗ.